About Me

My photo
Bengaluru, Karnataka, India
Mechanical Design Engineer in a MNC company.

Friday, June 8, 2007

Kannada Lyrics in Kannada

ಮೈಸೂರು ಮಲ್ಲಿಗೆ (1992) ದೀಪವು ನಿನ್ನದೆ ಗಾಳಿಯು ನಿನ್ನದೆ
ಕೆ.ಎಸ್. ನರಸಿಂಹಸ್ವಾಮಿ ಚಿತ್ರಗೀತೆ ಚಿತ್ರಗೀತೆಯಲ್ಲಿ ಕವನ ಭಾವಗೀತೆ ಮೈಸೂರ ಮಲ್ಲಿಗೆ ಮೈಸೂರು ಮಲ್ಲಿಗೆ ೧೯೯೨
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿಸಂಗೀತ: ಸಿ. ಎಸ್. ಅಶ್ವಥ್ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಕಡಲೂ ನಿನ್ನದೆ,
ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು


ನೀ ಹೀಂಗ ನೋಡಬ್ಯಾಡ ನನ್ನ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ನಾದಲೀಲೆ
ನೀ ಹೀಂಗ ನೋಡಬ್ಯಾಡ ನನ್ನ(ನಾದಲೀಲೆ - ಕವನ ಸಂಗ್ರಹ)

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ಪಲ್ಲವಿ

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರ್‍ಈಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ



ನಾದಲೀಲೆ - ಕುರುಡು ಕಾಂಚಾಣ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ನಾದಲೀಲೆ
ಕುರುಡು ಕಾಂಚಾಣ(ನಾದಲೀಲೆ - ಕವನ ಸಂಗ್ರಹ)

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ ಪಲ್ಲವಿ

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ

ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;


ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;

ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;

ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.




ತನನಂ ತನನಂ (2006) - ಕಲಿತ ಹುಡುಗಿ ಕುದ್ರಿ ನಡಿಗಿ

ಕೆ. ಕಲ್ಯಾಣ್ ಚಿತ್ರಗೀತೆ ಜನಪದ ತನನಂ ತನನಂ ೨೦೦೬
ಚಿತ್ರ: ತನನಂ ತನನಂಸಾಹಿತ್ಯ:ಸಂಗೀತ: ಕೆ. ಕಲ್ಯಾಣ್ಗಾಯನ: ಗುರುರಾಜ್ ಹೊಸಕೋಟೆ

ಕಲಿತ ಹುಡುಗಿ ಕುದ್ರಿ ನಡಿಗಿ ನಡೆದ ಬರತಿತ್ತ
ಕಲಿತ ಹುಡುಗಿ ಚಿಗರಿ ನಡಿಗಿ ಬಳುಕಿ ಬರತಿತ್ತ
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ...
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ... ನಿದ್ದಿ ಹಾರಿ ಹೋತ.... ಕಲಿತ ಹುಡುಗಿ

ಏಣಿ ಹತ್ತಿ ವೆಂಕಟರಮಣಾ ಸುಣ್ಣ ಬಳಿಯುತಿದ್ನಾ..
ಈ ಚಮಕ್ಕು ರಾಣಿಯ....
ಈ ಚಮಕ್ಕು ರಾಣಿಯ.... ಹೀಲ್ಸಿನ ಸದ್ದಿಗೆ ಬಗ್ಗಿ ನೋಡಿಬಿಟ್ನಾ..
ಕಂಡಿದ್ರೆ ತಾನೆ ಆ ಬಡ ಜೀವಾ ಇಂತ ಅಂದ ಚಂದ
ಸೈಡು ಹೊಡೆಯೋಕೋಗಿ ಮೋರಿ ಸೈಡು ಜಾರಿ ತಡಕ್ಕ್ ಅಂತ ಬಿದ್ನಾ... ಕಲಿತ ಹುಡುಗಿ

ಘಮ ಘಮ ಸೆಂಟನ್ನು ಹಚ್ಚಿಕೊಂಡ ಇವಳು ಕುಣಿಸುತ್ತಿದ್ಳು ಸೊಂಟ
ತಡೆಯೋಕಾಗದೆ...
ತಡೆಯೋಕಾಗದೆ... ಮೆಳ್ಳಗಣ್ಣ ಸೀನ ಹಿಂದೆ ಹೊಂಟೆ ಬಿಟ್ನಾ
ಹತ್ತಿರೊ ಸೈಕಲ್ ಪಂಚರ್ ಆದರೂ ಓಡ್ಸೋದು ಬಿಡಲಿಲ್ಲ
ಲೈಟು ಕಂಬಕ್ಕೆ ಡಿಚ್ಚಿ ಹೊಡೆದೆಬಿಟ್ಟ ಹಲ್ಲು ಉಳಿಯಲಿಲ್ಲ.... ಕಲಿತ ಹುಡುಗಿ

ಕಟ್ಟೆ ಮ್ಯಾಲೆ ಕೂತುಕೊಂಡ ಸೇಠು ಹೇಳುತಿದ್ನ ಜೋಕು
ಪಕ್ಕ್ ದಲ್ಲಿ ಮೋನಾ ಡಾರ್ಲಿಂಗ್...
ಮೋನಾ ಡಾರ್ಲಿಂಗ್... ಹಾದು ಹೋದಳು ಹಾರ್ತಾ ಇತ್ತು ಪ್ರಾಕು
ಮೈಮ್ಯಾಲೆ ಕಿರಿಕ್ಕು ಎಳಕೊಂಡ ಸೇಠು ಮರ್ತೆ ಬಿಟ್ನ ಜೋಕು
ಪ್ಯಾರಾಚೂಟು ಪ್ರಾಕಿಗೆ ಆಗೆಬಿಟ್ಟ ಕ್ರ್ಯಾಕು ಸೆಮಿಕ್ರ್ಯಾಕು ಕಲಿತ ಹುಡುಗಿ



ಗರಿ - ರಾಗರತಿ
ಗರಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ
ರಾಗರತಿ(ಗರಿ - ಕವನ ಸಂಗ್ರಹ)

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs-
ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.



ಮುಗಿಲ ಮಾರಿಗೆ ರಾಗರತಿಯಾ.. (ಶ್ರಾವಣ)
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ ಶ್ರಾವಣ

ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ
ಆಗಿತ್ತಆಗ ಸಂಜೆ ಆಗಿತ್ತ

ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವುಮೆಲ್ಲಗ ಓಡಿತ್ತ,
ಮ್ಯಾಲಕ ಬೆಳ್ಳಿನ ಕೂಡಿತ್ತ

ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ..
ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. .ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ


ನಾಕುತಂತಿ - ನಾನು ಬಡವಿ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ
ರಚನೆ: ಅಂಬಿಕಾತನಯದತ್ತ


ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು !!ಪ !!

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

ಪ್ರೀತ್ಸೋದ್ ತಪ್ಪಾ? ಹಂಸಲೇಖ ೧೯೯೮
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂಹಾಡು ಕೇಳಿ
ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾತಂದಾನ ತಂದನಾ

ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತನ್ದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ !!ಪ!!
ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈಆಂದ ಚಂದ ಹೊರುವ ಕಂಬದ ಜೋಡಿಗೆ
ಮಿಂಚಿರಿ ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ
ನಯವೊ ಹೈ ಲಯವೊ ಹೈನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ

ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದಅಪರೂಪದಂದ ನನಗಾಗಿ ತಂದ ೧

ಗಂಧ ತಂದನೊ ಗಮರುಗದಿಂದ
ರತಿಯ ತಂದನೊ ಅವನುರದಿಂದ
ಭ್ರಮರ ಹೈ ಅಮರ ಹೈ ಭ್ರಮರ ಅಮರಕಂಪನ
ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ
ಬಾನಿನಿಂದ ಏಕಾಂತವ ತಂದ

ಒಲವು ಹಾ ಚೆಲುವು ಹಾಒಲವು
ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ

ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ ೨

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ
* * *



ಗಂಗಾವತರಣ - ಇಳಿದು ಬಾ ತಾಯಿ ಇಳಿದು ಬಾ
ಕವನ ಗಂಗಾವತರಣ ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ

ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

No comments: