About Me

My photo
Bengaluru, Karnataka, India
Mechanical Design Engineer in a MNC company.

Tuesday, August 7, 2007

ಹುಡುಗಾಟ ಚಿತ್ರದ ಗೀತೆಗಳು

ಗಾಯಕರು : ಜಾರ್ಜ್ ಪೀಟರ್, ಜೆಸ್ಸಿ ಗಿಫ್ಟ್, ಪ್ರಸನ್ನ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಗೆಲುವೆ ನನ್ನಯ ಲೈಫಿನ ಫ್ಯಾಶನ್ನ
ನನಗೆ ಇಲ್ಲವೊ ಯಾವುದೆ ಟೆಂಶನ್
ನಗಿಸಿ ನಗುವುದೆ ನಮ್ಮಯ ಫ್ಯಾಶನ್
ಎಲ್ಲೆ ಹೋದರು ನಾವ್ ಸೆಂಸೇಶನ್

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
ಕೈತುಂಬಾ ಕಾಸಿದ್ರೆ ಮೈತುಂಬಾ ಜೋಶಿದ್ರೆ
ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಆ ಸೂರ್ಯ ಬಾನಲ್ಲಿ ಹುಟ್ತಾನೆ ನಮ್ ಕೇಳಿ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಉಳಿಯೋಕೆ ೫ ಸ್ಟಾರು ಸುತ್ತೇಲ್ಲ ಹುಡುಗೀರು
ಲೈಫಲ್ಲಿ ಗ್ಲಾಮ್ಮರ್ರು ಇದ್ರ್‍ಏನೆ ಸೂಪರ್ರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

Monday, August 6, 2007

ಮುಂಗಾರು ಮಳೆ ಡೈಲಾಗ್ಸ್- ಕನ್ನಡಲ್ಲಿ....

ಮುಂಗಾರು ಮಳೆ ಡೈಲಾಗ್ಸ್


1) ರೀ ಮನುಷ್ಯಗೆ ಬ್ಯಾಡ್ ಟೈಮ್ ಶುರು ಆದ್ರೆ ತಲೆ ಕೆರ್‌ಕೊಂಡು, ತಲೆಲಿ ಗಾಯ ಆಗಿ, ಗಾಯ ಕ್ಯಾನ್ಸರ್ ಆಗಿ ಡಾಕ್ಟರ್ ತಲೇನೇ ತೆಗೀಬೇಕು ಅಂತಾರೆ ಅಂಥದ್ರಲ್ಲಿ ನಾನು ಈ ದಿಲ್.. ಹೃದಯ ಹಾರ್ಟ್ ಅಂತಾರಲ್ಲ ..ಅಲ್ಲಿಗೆ ಕೈ ಹಾಕಿ ಪರ ಪರ ಅಂತ ಕೆರ್‌ಕೊಂಡ್ ಬಿಟ್ಟಿದೀನಿ ಕಣ್ರೀ..

2) ನಿಮ್ ನಗು,ನಿಮ್ ಬ್ಯೂಟಿ,ನಿಮ್ ವಾಯ್ಸ್,ನಿಮ್ ಕೂದ್ಲೂ , ನಿಮ್ ನೋಟ,ಈ ಬಿಕ್‌ನಾಸಿ ಮಳೆ,ನಿಮ್ ಗೆಜ್ಜೆ ಸದ್ದು ವಾಚು,ಆ ರಾಸ್ಕಲ್ ದೇವದಾಸ, ಗಂಟೆ ಸದ್ದು ಎಲ್ಲ ಮೀಕ್ಶ್ ಆಗಿ ನನ್ ಲೈಫಲ್ಲೇ ರಿಪೇರಿ ಮಾಡಕ್ಕಾಗ್ದೆ ಇರೋ ಅಷ್ಟು ಗಾಯ ಮಾಡಿದೆ ಕಣ್ರೀ...

3) ನಂಗೊತ್ತಾಗೊಯ್ತು ಕಣ್ರೀ ನೀವ್ ನಂಗೆ ಸಿಗಲ್ಲ ಅಂತ ಬಿಟ್ಕೋಟ್ಬಿಟ್ಟೆ ಕಣ್ರೀ.. ನಿಮ್ಮನ್ನ ಪಠಾಯ್ಸಿ ಲೋಫರ್ ಅನಿಸ್ಕೋಳೋದಕ್ಕಿಂತ ಒಬ್ಬ ಡೀಸೆಂಟ್ ಹುಡುಗನಾಗಿ ಇದ್ಬೀಟ್ರೆ ಸಾಕು ಅನ್ನಿಸ್ಬಿಟ್ಟಿದೆ ಕಣ್ರೀ.. ಆದ್ರೆ ಒಂದ್ ವಿಷ್ಯ ತಿಳ್ಕೊಲ್ಳಿ ನನ್ನಷ್ಟ್ತು ನಿಮ್ಮನ್ನ ಇಷ್ಟ ಪಡೋರು ಈ ಭೂಮೀಲ್ ಯಾರು ಸಿಗಲ್ಲ ಕಣ್ರೀ.....

4) ಏನೋ ದೇವದಾಸ, ಲೈಫ್‌ನಲ್ಲಿ ಮೊದಲ್‌ನೆ ಸಾರಿ ಇಷ್ಟಾ ಪಟ್ಟು ಒಂದ್ ಮೊಂಬತ್ತಿ ಹಚ್ಚಿದೆ, ಮಳೆ ಹುಯ್ದ್ಬಿಡ್ತು....

5) ಲೈಫ್‌ನಲ್ಲಿ ಈ ಲೆವಲ್ ಗೆ ಕನ್‌ಫ್ಯೂಸ್ ಆಗಿದ್ದು ಇದೆ ಮೊದ್ಲು....ಎಲ್ಲಾ ನಿಮ್ ಆಶೀರ್ವಾದ.........

6) ಅದೇನೋಪಾ, ನೀವು ಎಫ್.ಎಂ ನವ್ರು ಯಾರ್ ಫೋನ್ ಮಾಡಿದ್ರೂ ಪ್ರಾಬ್ಲಮ್ ಸಾಲ್ವ್ ಆಗತ್ತೆ ಅಂತ ರೈಲ್ ಹತ್ತಿಸ್ಥಾನೆ ಇರ್‍ತೀರಾ ಬಿಡ್ರಿ.....

7) ಈ ಮುಂಗಾರು ಮಳೆಲಿ ಇಷ್ಟೊಂದ್ ಬೆಂಕಿ ಇದೆ ಅಂತ ಗೊತ್ತಿರ್ಲಿಲ್ಲಾ ದೇವದಾಸ......

8) ದೇವದಾಸ್, ಯಾಕೋ ನನ್ನ ಜೊತೆ ಬರೋಕ್ ಹೋದೆ , ಏನಿದೆ ಗುರುವೇ ನನ್ನ ಲೈಫಲ್ಲಿ?

9) ಈ ಪ್ರೀತಿ ಮಳೆಗೆ ಸಿಕ್ಕಿ ನಾನ್ ದಿಕ್ಕಾಪಾಲಾಗ್ ಹೋದೆ ಕಣೋ, ಧಿಕ್ಕೆ ಇಲ್ಲ ಕಣೋ ನಂಗೆ?.

10) ಇಷ್ಟೆಲ್ಲಾ ನೋವು ಎಧೆಲ್ಲಿ ಇಟ್ಕೋ oಡು ನಾನ್ ಉಳಿತೀನೆನೋ ದೇವದಾಸ?

11) ನೀವು ಸಿಗ್ಧೆ ಇದ್ರೆ ನೋವೇ ಆಗತ್ತ್ ರೀ, ಆದ್ರೆ ಈ ನೋವಲ್ಲೂ ಒಂಥರಾ ಸುಖ ಇದೆ... ಸ್ವೀಟ್ ಪೇಯಿ ನ್...ಸ್ವೀಟ್ ಮೇಮೊರೀಸ್, ಜೊತೆಗೆ ಈ ಹಾಟ್ ಡ್ರಿಂಕ್ ಲೋಕಲ್.......ನೀರಾ ಕೈಯಲ್ಲಿದ್ರೆ ದೂಸ್ರಾ ಮ್ಯಾಟರ್-ಇಲ್ಲಾ ಕಣ್ರೀ......

12) ಅರ್ಥ ಆಗ್ಲಿಲ್ಲ , ಆಗೋದು ಬೇಡ ಬಿಡಿ.....




13) ಥ್ಯಾಂಕ್ಸ್ ಕಣ್ರೀ ನಂದಿನಿ, ಪ್ರೀತಿ ವಿಷ್ಯದಲ್ಲಿ ನನ್ನ ಕಣ್ನ್ ತೆರೆಸಿದ ದೇವತೆ ಕಣ್ರೀ ನೀವು....ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ಮೇಳೂ, ನಾನ್ ಈ ಉಪಕಾರ ನ ಮರಿಯಲ್ಲಾ ರೀ........ನೀವ್ ಸಿಗಲ್ಲ ಅಂತ ನಂಗೆನು ಬೇಜಾರ್ ಇಲ್ಲ ರೀ......ನಿಮ್ ಜೊತೆ ಕಳೆದ್ನಲ್ಲಾ ಈ ನಾಲಕ್ ದಿವಸ, ಅಷ್ಟು ಸಾಕು ಕಣ್ರೀ........ಅದನ್ನೇ ರಿವೈಂಡ್ ಮಾಡ್ಕೊಂಡು ಹೇಗೋ ಜೀವನ ತಳ್ಳಿ ಬಿಡ್ತೀನಿ....

14) ಪ್ರೀತಂ: ರೀ ರೀ ರೀ ಆ ವಾಚ್ ಯಾಕ್ರಿ ತಗೊಂಡ್ರಿ ಆ ವಾಚಲ್ಲಿ ಹೆಚ್ಚು ಕಮ್ಮಿ ನನ್ ಲೈಫೇ- ಇದೆ. ನಂದಿನಿ: ನಿಮ್ಮೊಬ್ರದೆನಾ ಲೈಫ್ ಇದ್ರಲ್ಲಿರೋದು ಪ್ರೀತಂ: ಹಂಗಂತೀರಾ, ಹೂಂ ಇದು ಅರ್ಥ ಆಗ್ಲಿಲ್ಲ, ಇದು ಅರ್ಥ ಆಗೋದು ಬೇಡ ಬಿಡಿ.

15) ಏನ್ ಜೇಮ್ಸ್ ಬಾಂಡು ನಿಮ್ಮಪ್ಪ, ! ಯಾರ್ರೀ ಹೆದರ್‌ತಾರೆ ಅವ್ರಿಗೆ. ನಂ ಮಾದ್ವೆ ಆಗ್ಲೀ ನಿಮ್ಮಪ್ಪಾಂಗೆ ಬಿಳಿ ದ್ರೇಸ್ಸ ಹಾಕ್ಸಿ, ಇದೆ ಗನ್ನ್ ಕೈಯಲ್ಲಿ ಕೊಟ್ಟು ನಂ ಮನೆ ಮುಂದೆ ಸೆಕೂರಿಟಿಗೆ ನಿಲ್ಲಿಸ್ತೀನಿ..!. ನೋಡ್ತಾ ಇರಿ ನಂಗೂ ನಿಮ್ಮಪ್ಪಾಂಗು ಇನ್ನೆರ್ಡ್ ದಿನದಲ್ಲಿ ಹೆಂಗೆ ಧೋಸ್ತಿ ಆಗುತ್ತೆ ಅಂತಾ. ತೋರ್ಸರಿ ಈ ವಾಚ್ ನ ನಿಮ್ಮಪ್ಪನ್‌ಗೆ.

16) ಅಂಕಲ್, ಮನುಷ್ಯ ಎಷ್ಟೇ ದೊಡ್ಡವ್ನಾದ್ರೂ ಚಿಕ್ಕ ಮಗು ತರಾ ಇರಬೇಕು ಅಂತ ನಮ್ಮಪ್ಪ ಅಮ್ಮ ಹೆಳ್ಕೋಟ್ಟಿದಾರೆ ಅಂಕಲ್..!

17) ಈ ಗಂಡು ಜನ್ಮ ಸಾಕಪ್ಪ ಸಾಕು, ಲೊ ದೇವದಾಸ ಆ ಹುಡುಗಿ ಮತ್ತೆ ಬಂದ್ ಗಿಂದ್ ಬಿಟ್ಟಾಳು ನೋಡ್‌ಕೊಳ್ಳೋ ಒಳ್ಳೇ ಕ್ಯಾಬರೆ ಡ್ಯಾನ್ಸರ್ ತರಾ ಆಗ್ ಹೋಯ್ತು ನಂ ಲೈಫು..

18) ನಂಗೆ ಸಿಗೋ ಬುಧ್ಧಿಗಳೆಲ್ಲ ಎಣ್ಣೆ ಹೋಡೀ ಅಂತಾರೆ..!

19) ಜಯಂತ್ ರಾವ್ ಅಂತ ನಮ್ಮಪ್ಪ ಬೇಜಾನ್ ಮಾಡಿಟ್ಟಿದಾರೆ, ನಮ್ಮಮ್ಮ ಬರೋ ಸೊಸೆಗೆ ಪ್ರಾಣ ಬೇಕಾದ್ರೂ ಕೊಡಕ್ಕೆ ರೆಡಿ. ಒಟ್ಟಿನಲ್ಲಿ ಯದ್ವಾ ತದ್ವಾ ಗ್ರೇಟ್ ಫ್ಯಾಮಿಲಿ ಬ್ಯಾಕ್ಕ್‌ಗ್ರೌಂಡು ನಂದು. ನೀವ್ ನಂಗೆ ಇಷ್ಟ ಅಗ್‌ಬಿಟ್ಟಿದಿರಾ ನಿಮ್ಮಲ್ಲಿ ಏನೇ ಪ್ರಾಬ್ಲಮ್ ಇದ್ರು ಸಿ ಸಿನ್ಸಿಯರ್ ಆಗಿ ಸಂಸಾರ ಮಾಡ್ಕೊಂಡ್ ಹೋಗ್ತೀನಿ

20) ಮೆಂಟಲ್ ಹಾಸ್ಪಿಟಲ್ ಗೊತ್ತಾ? ಅಯ್ಯೋ ಅದೊಂದ್ ತರಾ ನಂಗೆ ತವ್ರು ಮನೆ ಇದ್ದಂಗೆ ಬಿಡಿ .,.. ಹೋಗಕ್ಕೆ ಟೈಮೇ ಆಗ್ಲಿಲ್ಲಾ

21) ನನ್ ಹೆಸ್ರು ಹಾಳಾಗ್ ಹೋಗಿದೆ..! ಹೇಳಿದ್ರೂ ಪ್ರಯೋಜನ ಇಲ್ಲ ಬಿಡಿ





22) ನಿಮ್ ಮಗಳಿಗೆ ನಾಲಕ್ ಪೈಸಾ ಬುಧ್ಧಿ ಇಲ್ಲ ಅಂಕಲ್, ದಡ್ಡಿ ಅವಳು , ಒಂದ್ ಜಡ್‌ಜೆಮೆಂಟ್ ಇಲ್ಲ ಆಗೋ ಗಂಡನ ಬಗ್ಗೆ, ನನ್ನಂತ ಸ್ಮಾರ್ಟ್ ಹುಡುಗನ್ನಾ ಎದುರ್‌ಗಡೆ ಇಟ್ಕೊಂಡು… ಇಟ್ಕೊಂಡು ….! ಗುರಿ ಇಟ್ರಲ್ಲ ಅಂಕಲ್ ಏನ್ ಗುರಿ ಅಂಕಲ್ ಅದು..

23) ಏನ್ ಅಂಕಲ್ ನೀವು, ನಿಮ್ ವಯಸ್ಸೇನು ನನ್ ವಯಸ್ಸೇನು.. ಅಲ್ಲಾ ನೀವೇ ನಂಗೆ ಕುಡಿ ಅಂತಾ ಅನ್ಬಹುದಾ ..?ನಾನು ತುಂಬಾ ಒಳ್ಳೇ ಹುಡುಗಾ.. ಬೇಡ್ವಾ ಸರಿ ಅನಿಸಿದ್ದನ್ನ ಹೆಳ್ಬಿ ಡ್ಬೇಕು. ಐ ಲೈಕ್ ಸಚ್ ಪೀಪಲ್ . ಸೋ, ಯು ಲೈಕ್ ಮೀ ಅಂಕಲ್. ನೀವು ಗ್ರೇಟ್ ಅಂಕಲ್, ನನ್ನ ನೊಡಿದ್ ತಕ್ಷಣ ಇಷ್ಟ ಪಟ್ತಬಿಟ್ತರಿ ..! ನಾನು ನಿಮ್ ಮಗಳ್ನ ಮದ್ವೆ ಅಗ್ತೀನಿ ಅಂದ್ರೂ ನೀವು ಅಷ್ಟೇನೂ ಕೋಪ ಮಾಡ್‌ಕೊಳ್ಳಲ್ಲ ಅನ್ಸುತ್ತೆ..!. ಹೂಂಮ್, ನೋ ಪ್ರಾಬ್ಲಮ್ ಯಾಕೋ ನೀವು ತುಂಬಾನೆ ಗ್ರೇಟ್ ಆಗ್‌ಬಿಟ್ರಿ. ಎಲ್ಲೋ ಮಿಸ್ ಹೋಡಿತಿದೆ ಎಲ್ಲಿ ಅಂತ ಗೊತ್ತಾಗ್ಲಿಲ್ಲಾ..!

24) ಮಳೆ ಜೋರು ಹುಯ್ಟ ಉಂಟು ..! ತಂಡಿ ಚಳಿ ಪೆಟ್ ಕೊಟ್ರೆ ನೋವಾಗ್ತದೆ ನೀ ಇನ್ನೂ ಬಚ್ಚಾ ಅಮ್ಮಣ್ಣಿ ಪಾಪು..! ಪೋ.. ಅಮ್ಮಣ್ಣಿ ಪಾಪು.. ಯಾರು...?

25) ನೀವು ತುಂಬಾ ಹೆದರಿಸ್ಟೀರಪ್ಪ..! ನಿಮ್ಮಪ್ಪನ ನಾನ್ ನೋಡ್ಕೋತಿನಿ ರಾತ್ರಿ ಕನಸಲ್ಲಿ ಬರ್ತೀನಿ..

26) ನೋಡ್ರೀ ಆವಾಗ್ಲೂ ಮಳೆ ಗಾಲ ಅಂತೆ. ನಾ ಮಾತಾಡ್ತೀದೀನಲ್ಲ ನೀ ಸೂಮ್ನಿರು ತಂದೆ ..! ಯಾರ್ರೀ ಇವರನ್ನ ಕರ್ನಲ್ ಮಾಡಿದ್ದು..! ಆವರ್‍ಗೆ ಕಿವಿ ಕೇಳಿಸಿದ್ರೂ, ಕೇಳಿಸ್ದೇ ಇದ್ರೂ ನಾನಂತೂ ಹೆದ್ರ್‌ಕೊಳ್ಳಲ್ಲ ಅವ್ರ ನಾಲ್‌ಗೆ ಕತ್ತ್ರಿಸಿ ಜೇಬಳ್ಲಿ ಇಟ್ಕೋತಿನಿ..! ನೋಡಿ ಬೇಕಾದ್ರೆ ಅಂಕಲ್ ಈಗಿಂಧೀಗ್ಲೆ ನಿಮ್ ಮಗಳು ನಂದಿನಿ ದೇವಿ ಆವರನ್ನ ಓಡಿಸ್‌ಕೊಂಡ್ ಹೋಗಿ ಮದ್ವೆ ಆಗಿ.. ನಂಗೆ ಮೊಮ್ಮಕ್ಕಳು ಹುಟ್ಟಿದ್ಮೆಲೇ ಕರ್ಕೊಂಡ್ ಬಂದ್ರೆ ಏನ್ ಪ್ರಾಬ್ಲಮ್.... ಏನ್ ಪರ್ವಾಗಿಲ್ಲ ಆರಾಮಾಗಿ ಗಾಡಿ ಓಡಿಸು..!

27) ಮಾನ, ಮರ್ಯಾದೆ ಅಂದ್ರೆ ಏನು ಅಂತ ಗೊತ್ತಿದೆಯಾ ನಿಮ್ಗೆ..? ಎಲ್ಲೋ ಕೇಳಿದಂಗಿದೆ ಅಷ್ಟ್ ಐಡಿಯಾ ಇಲ್ಲಾರೀ..

28) ಭಗವಂತಾ ವಯಸ್ಸ ಹುಡುಗರ್‌ನೆಲ್ಲ ನೀನೆ ಕಾಪಾಡ್ಬೇಕು..ಕೆ.ಎಸ್.ಆರ್.ಟಿ ಗೆ ಸಿಕ್ಕಿ ಸಾಯೋ ನಾಯಿಗಳಾದ್ರೂ ಎಷ್ಟೋ ವಾಸಿ..!

29) ಅಯ್ ರಾಸ್ಕಲ್ ಸುಮ್ನಿರೋ ..! ಹುಡುಗಿ ರೂಟ್ ಬದಲಾಯ್ಸ್ತಿದಳಲ್ಲಾ ಲೂಸ್ ಗೀಸ್ ಆಗಿದಳಾ ಕೇಳು ಅಂತಿದಾನೆ..!
30) ಆ ವಾಚಲ್ಲಿ ನನ್ನ ಕೋಟಿ ನೆನಪುಗಳಿವೆ..! ಇಷ್ಟದ ಪ್ರಶ್ನೆ ಅಲ್ಲಾ..ಕಷ್ಟದ ಪ್ರಶ್ನೆ..

Friday, June 8, 2007

Kannada Lyrics in Kannada

ಮೈಸೂರು ಮಲ್ಲಿಗೆ (1992) ದೀಪವು ನಿನ್ನದೆ ಗಾಳಿಯು ನಿನ್ನದೆ
ಕೆ.ಎಸ್. ನರಸಿಂಹಸ್ವಾಮಿ ಚಿತ್ರಗೀತೆ ಚಿತ್ರಗೀತೆಯಲ್ಲಿ ಕವನ ಭಾವಗೀತೆ ಮೈಸೂರ ಮಲ್ಲಿಗೆ ಮೈಸೂರು ಮಲ್ಲಿಗೆ ೧೯೯೨
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿಸಂಗೀತ: ಸಿ. ಎಸ್. ಅಶ್ವಥ್ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಕಡಲೂ ನಿನ್ನದೆ,
ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು


ನೀ ಹೀಂಗ ನೋಡಬ್ಯಾಡ ನನ್ನ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ನಾದಲೀಲೆ
ನೀ ಹೀಂಗ ನೋಡಬ್ಯಾಡ ನನ್ನ(ನಾದಲೀಲೆ - ಕವನ ಸಂಗ್ರಹ)

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ಪಲ್ಲವಿ

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರ್‍ಈಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ



ನಾದಲೀಲೆ - ಕುರುಡು ಕಾಂಚಾಣ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ನಾದಲೀಲೆ
ಕುರುಡು ಕಾಂಚಾಣ(ನಾದಲೀಲೆ - ಕವನ ಸಂಗ್ರಹ)

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ ಪಲ್ಲವಿ

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ

ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;


ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;

ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;

ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.




ತನನಂ ತನನಂ (2006) - ಕಲಿತ ಹುಡುಗಿ ಕುದ್ರಿ ನಡಿಗಿ

ಕೆ. ಕಲ್ಯಾಣ್ ಚಿತ್ರಗೀತೆ ಜನಪದ ತನನಂ ತನನಂ ೨೦೦೬
ಚಿತ್ರ: ತನನಂ ತನನಂಸಾಹಿತ್ಯ:ಸಂಗೀತ: ಕೆ. ಕಲ್ಯಾಣ್ಗಾಯನ: ಗುರುರಾಜ್ ಹೊಸಕೋಟೆ

ಕಲಿತ ಹುಡುಗಿ ಕುದ್ರಿ ನಡಿಗಿ ನಡೆದ ಬರತಿತ್ತ
ಕಲಿತ ಹುಡುಗಿ ಚಿಗರಿ ನಡಿಗಿ ಬಳುಕಿ ಬರತಿತ್ತ
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ...
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ... ನಿದ್ದಿ ಹಾರಿ ಹೋತ.... ಕಲಿತ ಹುಡುಗಿ

ಏಣಿ ಹತ್ತಿ ವೆಂಕಟರಮಣಾ ಸುಣ್ಣ ಬಳಿಯುತಿದ್ನಾ..
ಈ ಚಮಕ್ಕು ರಾಣಿಯ....
ಈ ಚಮಕ್ಕು ರಾಣಿಯ.... ಹೀಲ್ಸಿನ ಸದ್ದಿಗೆ ಬಗ್ಗಿ ನೋಡಿಬಿಟ್ನಾ..
ಕಂಡಿದ್ರೆ ತಾನೆ ಆ ಬಡ ಜೀವಾ ಇಂತ ಅಂದ ಚಂದ
ಸೈಡು ಹೊಡೆಯೋಕೋಗಿ ಮೋರಿ ಸೈಡು ಜಾರಿ ತಡಕ್ಕ್ ಅಂತ ಬಿದ್ನಾ... ಕಲಿತ ಹುಡುಗಿ

ಘಮ ಘಮ ಸೆಂಟನ್ನು ಹಚ್ಚಿಕೊಂಡ ಇವಳು ಕುಣಿಸುತ್ತಿದ್ಳು ಸೊಂಟ
ತಡೆಯೋಕಾಗದೆ...
ತಡೆಯೋಕಾಗದೆ... ಮೆಳ್ಳಗಣ್ಣ ಸೀನ ಹಿಂದೆ ಹೊಂಟೆ ಬಿಟ್ನಾ
ಹತ್ತಿರೊ ಸೈಕಲ್ ಪಂಚರ್ ಆದರೂ ಓಡ್ಸೋದು ಬಿಡಲಿಲ್ಲ
ಲೈಟು ಕಂಬಕ್ಕೆ ಡಿಚ್ಚಿ ಹೊಡೆದೆಬಿಟ್ಟ ಹಲ್ಲು ಉಳಿಯಲಿಲ್ಲ.... ಕಲಿತ ಹುಡುಗಿ

ಕಟ್ಟೆ ಮ್ಯಾಲೆ ಕೂತುಕೊಂಡ ಸೇಠು ಹೇಳುತಿದ್ನ ಜೋಕು
ಪಕ್ಕ್ ದಲ್ಲಿ ಮೋನಾ ಡಾರ್ಲಿಂಗ್...
ಮೋನಾ ಡಾರ್ಲಿಂಗ್... ಹಾದು ಹೋದಳು ಹಾರ್ತಾ ಇತ್ತು ಪ್ರಾಕು
ಮೈಮ್ಯಾಲೆ ಕಿರಿಕ್ಕು ಎಳಕೊಂಡ ಸೇಠು ಮರ್ತೆ ಬಿಟ್ನ ಜೋಕು
ಪ್ಯಾರಾಚೂಟು ಪ್ರಾಕಿಗೆ ಆಗೆಬಿಟ್ಟ ಕ್ರ್ಯಾಕು ಸೆಮಿಕ್ರ್ಯಾಕು ಕಲಿತ ಹುಡುಗಿ



ಗರಿ - ರಾಗರತಿ
ಗರಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ
ರಾಗರತಿ(ಗರಿ - ಕವನ ಸಂಗ್ರಹ)

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs-
ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.



ಮುಗಿಲ ಮಾರಿಗೆ ರಾಗರತಿಯಾ.. (ಶ್ರಾವಣ)
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ ಶ್ರಾವಣ

ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ
ಆಗಿತ್ತಆಗ ಸಂಜೆ ಆಗಿತ್ತ

ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವುಮೆಲ್ಲಗ ಓಡಿತ್ತ,
ಮ್ಯಾಲಕ ಬೆಳ್ಳಿನ ಕೂಡಿತ್ತ

ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ..
ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. .ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ


ನಾಕುತಂತಿ - ನಾನು ಬಡವಿ
ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಭಾವಗೀತೆ
ರಚನೆ: ಅಂಬಿಕಾತನಯದತ್ತ


ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು !!ಪ !!

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

ಪ್ರೀತ್ಸೋದ್ ತಪ್ಪಾ? ಹಂಸಲೇಖ ೧೯೯೮
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂಹಾಡು ಕೇಳಿ
ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾತಂದಾನ ತಂದನಾ

ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತನ್ದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ !!ಪ!!
ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈಆಂದ ಚಂದ ಹೊರುವ ಕಂಬದ ಜೋಡಿಗೆ
ಮಿಂಚಿರಿ ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ
ನಯವೊ ಹೈ ಲಯವೊ ಹೈನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ

ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದಅಪರೂಪದಂದ ನನಗಾಗಿ ತಂದ ೧

ಗಂಧ ತಂದನೊ ಗಮರುಗದಿಂದ
ರತಿಯ ತಂದನೊ ಅವನುರದಿಂದ
ಭ್ರಮರ ಹೈ ಅಮರ ಹೈ ಭ್ರಮರ ಅಮರಕಂಪನ
ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ
ಬಾನಿನಿಂದ ಏಕಾಂತವ ತಂದ

ಒಲವು ಹಾ ಚೆಲುವು ಹಾಒಲವು
ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ

ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ ೨

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ
* * *



ಗಂಗಾವತರಣ - ಇಳಿದು ಬಾ ತಾಯಿ ಇಳಿದು ಬಾ
ಕವನ ಗಂಗಾವತರಣ ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ

ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ